ಮಡಿಕೇರಿಯಲ್ಲಿ ಬೃಹತ್ ಉದ್ಯೋಗ ಮೇಳ ಇದೇ ಮಾರ್ಚ್ 8 ರಂದು ನಡೆಯಲಿದೆ.!!
18ರಿಂದ 35 ವರ್ಷದ ವಯೋಮಿತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಸಹ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ಮಾರ್ಚ್ 8ರಂದು ಆಯೋಜಿಸಲಾಗಿದೆ. ಇದು ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳ ಇದಾಗಿದೆ.
ಈ ಉದ್ಯೋಗ ಮೇಳವನ್ನು ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್‌ನ ಡಿಡಿಯುಜಿಕೆವೈ ಯೋಜನೆಯಡಿ ಆಯೋಜಿಸಲಾಗಿದೆ. ಜಿಲ್ಲೆಯ ಸುಮಾರು 800 ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸುವ ಗುರಿಯನ್ನು ಈ ಸಂಸ್ಥೆಗಳು ಹೊಂದಿವೆ .

ಈ ಉದ್ಯೋಗ ಹಲವಾರು ಪ್ರಮುಖ ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತವೆ. ಆ ಸ್ಥಳದಲ್ಲಿ ಉದ್ಯೋಗ ಅವಕಾಶ ಕಲ್ಪಿಸಿ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಮಾರ್ಚ್ 08 ಬೆಳಗ್ಗೆ 10 ಗಂಟೆಗೆ ಕೊಡಗು ಜಿಲ್ಲಾ ಪಂಚಾಯಿತಿಯ ವತಿಯಿಂದ ನಗರದ ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ITI) ನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.
ಕೊಡಗು ಜಿಲ್ಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಲ್ಲರೂ ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊಡಗು ಜಿಲ್ಲೆಯ ಪಂಚಾಯತಿ ಕಾರ್ಯದರ್ಶಿಯಾದಂತಹ ಆನಂದ ಪ್ರಕಾಶ್ ಮೀನಾ ಅವರು ಕರೆ ನೀಡಿದ್ದಾರೆ.
ಅಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 05 ಈ ಉದ್ಯೋಗ ಮೇಳಕ್ಕೆ ಅರ್ಜಿ ಸಲ್ಲಿಸಬೇಕು.
ಜಿಲ್ಲಾ ತಾಂತ್ರಿಕ ಪ್ರೋಗ್ರಾಮರ್ ಹುದ್ದೆಗೆ BE ಅಥವಾ B.Tech, BCA, MCA, ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫರ್ಮೇಷನ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಟೆಲಿಕಾಂ ಅರ್ಹತೆಯನ್ನು ಹೊಂದಿರಬೇಕು.
ಯಾವುದೇ ಸರ್ಕಾರ ಅಥವಾ ಸಂಸ್ಥ ಕಂಪನಿಗಳಲ್ಲಿ ಎರಡು ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ರಿಂದ ಗರಿಷ್ಠ 40 ವರ್ಷಗಳು ಹೊಂದಿರಬೇಕು. 1 ವರ್ಷಕ್ಕೆ ಮಾತ್ರ ಹೊರಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯುತ್ತಿದೆ. ಅಗತ್ಯವಿದ್ದರೆ ಮುಂದಿನ ವರ್ಷಕ್ಕೆ ಕೂಡ ವಿಸ್ತರಿಸಲಾಗುತ್ತದೆ.
ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರಬೇಕು ಮತ್ತು ಅವರ ನೇಮಕಾತಿ ಕರ್ತವ್ಯಗಳ ದಕ್ಷ ನಿರ್ವಹಣೆಯನ್ನು ಕುಂಠಿತಗೊಳಿಸುವ ಯಾವುದೇ ದೈಹಿಕ ದೌರ್ಬಲ್ಯದಿಂದ ಮುಕ್ತರಾಗಿರಬೇಕು. ಅಭ್ಯರ್ಥಿಯು ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಬಾರದು.
ಅಭ್ಯರ್ಥಿಯ ಸ್ವ-ವಿವರಣೆ, 10 ನೇ ತರಗತಿಯ ಅಂಕಪಟ್ಟಿ(MarksCard) , ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮಾಣಪತ್ರಗಳು & ದಾಖಲೆಗಳು, ನೇಮಕಾತಿ ಆದೇಶಗಳು, ಅನುಭವ (Experience Certificate) ಪ್ರಮಾಣಪತ್ರ ಮತ್ತು ಒಂದು ಭಾವಚಿತ್ರ (Photo) ಮತ್ತು ಆಧಾರ್ ಪ್ರತಿಯನ್ನು ಅರ್ಜಿಯೊಂದಿಗೆ ಅದರ ಜೊತೆಗೆ ದೃಢೀಕರಿಸಿ ಲಗತ್ತಿಸಿ ಕೊನೆಯ ದಿನಾಂಕದೊಳಗೆ ಪ್ರಮಾಣೀಕೃತ / ನೋಂದಾಯಿತ ಅಂಚೆ ಇಲಾಖೆಯ ಮೂಲಕ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ ಜಿಲ್ಲಾಧಿಕಾರಿಗಳ ಕಚೇರಿ, Karnataka, ಕೊಡಗು ಜಿಲ್ಲೆ, ಮಡಿಕೇರಿ. ಅರ್ಜಿದಾರರು ನಿಗದಿತ ಸಮಯದೊಳಗೆ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‍ಸೈಟ್ https://kodagu.nic.nic.in ರಲ್ಲಿ ಪಡೆದು ಭರ್ತಿ ಮಾಡಿ ಈ ವೆಬ್ ಸೈಟ್ ನಲ್ಲಿ ಕೇಳಿದ /ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.
ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತೇವೆ.
ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು ನಿಖರವಾದ & ಅಧಿಕೃತವಾದ ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.