New Income Tax Bill ಮುಂಗಾರು ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಚರ್ಚೆ: ನಿರ್ಮಲಾ ಸೀತಾರಾಮನ್
New Income Tax Bill ಇಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ 2025 ರ ಮೇಲಿನ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಫೆಬ್ರವರಿ 13 ರಂದು ಸದನದಲ್ಲಿ ಮಂಡಿಸಲಾದ ಹೊಸ ಆದಾಯ ತೆರಿಗೆ ಮಸೂದೆಯನ್ನು ಪ್ರಸ್ತುತ ಆಯ್ಕೆ ಸಮಿತಿಯು ಪರಿಶೀಲಿಸುತ್ತಿದೆ ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್
ನವದೆಹಲಿ: ಹೊಸ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ 2025 ರ ಮೇಲಿನ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಫೆಬ್ರವರಿ 13 ರಂದು ಸದನದಲ್ಲಿ ಮಂಡಿಸಲಾದ ಹೊಸ ಆದಾಯ ತೆರಿಗೆ ಮಸೂದೆಯನ್ನು ಪ್ರಸ್ತುತ ಆಯ್ಕೆ ಸಮಿತಿಯು ಪರಿಶೀಲಿಸುತ್ತಿದೆ ಎಂದು ಹೇಳಿದರು.
ಸಂಸತ್ತಿನ ಮುಂದಿನ ಮುಂಗಾರು ಅಧಿವೇಶನದ ಮೊದಲ ದಿನದೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಆಯ್ಕೆ ಸಮಿತಿಗೆ ಸೂಚಿಸಲಾಗಿದೆ. ನಾವು ಅದನ್ನು (ಹೊಸ ಆದಾಯ ತೆರಿಗೆ ಮಸೂದೆ) ಮಾನ್ಸೂನ್ ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತೇವೆ” ಎಂದು ಸೀತಾರಾಮನ್ ಹೇಳಿದರು.
ನಿರ್ಮಲಾ ಸೀತಾರಾಮನ್
ಹೊಸ ಆದಾಯ ತೆರಿಗೆ ಮಸೂದೆ: ಏನು ಬದಲಾಗಲಿದೆ?
ಹಳೆಯ ಆದಾಯ ತೆರಿಗೆ ಕಾನೂನು ಡಿಜಿಟಲ್ ಆಸ್ತಿಗಳನ್ನು ಪರಿಶೀಲಿಸಲು ಕಾನೂನು ಬೆಂಬಲವನ್ನು ನೀಡಲಿಲ್ಲ. ಈ ಕಾರಣಕ್ಕಾಗಿ ಈಗ ಸೇರಿಸಲಾಗಿದೆ. ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಡಿಜಿಟಲ್ ಅಂಶಗಳ ಪರಿಶೀಲನೆಯನ್ನು ಸೇರಿಸಲಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನವು ಸಾಮಾನ್ಯವಾಗಿ ಜುಲೈನಲ್ಲಿ ನಡೆಯುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.
ಆರು ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯಿದೆ, 1961 ಅನ್ನು ಬದಲಿಸಲಾಗುತ್ತಿದೆ ಮತ್ತು ಡಿಜಿಟಲ್ ಯುಗಕ್ಕೆ ಮಾರ್ಪಾಡುಗಳೊಂದಿಗೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಹೊರತರಲಾಗುತ್ತಿದೆ.