Motorola Edge 60 – 512GB ಸ್ಟೋರೇಜ್, 68W ಟರ್ಬೋ ಚಾರ್ಜಿಂಗ್ ಹಾಗೂ 50MP ಕ್ಯಾಮೆರಾದೊಂದಿಗೆ Motorola Edge 60 ಫೋನ್

512GB ಸ್ಟೋರೇಜ್, 68W ಟರ್ಬೋ ಚಾರ್ಜಿಂಗ್ ಹಾಗೂ 50MP ಕ್ಯಾಮೆರಾದೊಂದಿಗೆ Motorola Edge 60 ಶೀಘ್ರದಲ್ಲೇ ಲಾಂಚ್ ಆಗಲಿದೆ!

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೋಟೊರೋಲಾ ಕಂಪನಿಯ ಹೊಸ Moto Edge 60 ಸ್ಮಾರ್ಟ್‌ಫೋನ್ ಲಾಂಚ್ ಆಗಲು ಸಿದ್ಧವಾಗಿದೆ. ಈ ಫೋನ್‌ನಲ್ಲಿ ಶಕ್ತಿಶಾಲಿ ಫೀಚರ್‌ಗಳಾದ 512GB ಸ್ಟೋರೇಜ್, 68W ಟರ್ಬೋ ಫಾಸ್ಟ್ ಚಾರ್ಜಿಂಗ್, ಮತ್ತು 200MP ಕ್ಯಾಮೆರಾ ಸೆಟಪ್ ಇರುವ ಸಾಧ್ಯತೆ ಇದೆ. ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಅದ್ಭುತ ಕ್ಯಾಮೆರಾ ಸೆಟಪ್ :

WhatsApp Group Join Now
Telegram Group Join Now

ಮೋಟೊ ಎಡ್ಜ್ 60 ಫೋನ್‌ನಲ್ಲಿ 50MP ಸೋನಿ LYT700C ಪ್ರೈಮರಿ ಕ್ಯಾಮೆರಾ, 13MP ಅಲ್ಟ್ರಾ ವೈಡ್ ಲೆನ್ಸ್ ಮತ್ತು ಒಂದು ಡೆಡಿಕೇಟೆಡ್ 3-in-1 ಲೈಟ್ ಸೆನ್ಸಾರ್ ನೀಡಲಾಗುವ ಸಾಧ್ಯತೆ ಇದೆ. ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್‌ಗಾಗಿ 32MP ಫ್ರಂಟ್ ಕ್ಯಾಮೆರಾ ಕೂಡ ಇರಬಹುದು. Moto AI ತಂತ್ರಜ್ಞಾನದಿಂದ ಈ ಫೋನ್‌ನ ಕ್ಯಾಮೆರಾ ಸಾಮರ್ಥ್ಯ ಇನ್ನಷ್ಟು ಉತ್ತಮವಾಗಲಿದೆ.

ಅತ್ಯಾಧುನಿಕ ಡಿಸ್ಪ್ಲೇ ಹಾಗೂ ಸ್ಟೈಲಿಷ್ ಡಿಸೈನ್ :

6.7 ಇಂಚಿನ ಫುಲ್ HD AMOLED ಡಿಸ್ಪ್ಲೇ, ಸ್ಲಿಮ್ ಬೆಜಲ್ ಮತ್ತು ಕ್ವಾಡ್ ಕರ್ವ್ಡ್ ಎಡ್ಜ್ ಗಳೊಂದಿಗೆ ಈ ಫೋನ್ ಬರಲಿದ್ದು, ಅದ್ಭುತ ದೃಶ್ಯಾನುಭವ ನೀಡುತ್ತದೆ. ಫೋನ್ ಬ್ಲೂ ಮತ್ತು ಗ್ರೀನ್ ರಂಗಗಳಲ್ಲಿ ಲಭ್ಯವಿರಲಿದ್ದು, 3D ಸಿಲಿಕಾನ್ ವೆಗನ್ ಲೆದರ್ ಫಿನಿಶ್ ಇರುತ್ತದೆ. Gorilla Glass 7i ಪ್ರೊಟೆಕ್ಷನ್ ಸಹ ಇರಲಿದೆ.

ಬಲಿಷ್ಠ ಪರ್ಫಾರ್ಮೆನ್ಸ್ ಮತ್ತು ಬ್ಯಾಟರಿ

ಈ ಫೋನ್‌ನಲ್ಲಿ MediaTek Dimensity 7400 ಚಿಪ್‌ಸೆಟ್ ಇರಲಿದ್ದು, 8GB ಅಥವಾ 12GB RAM, 256GB ಅಥವಾ 512GB ROM‌ ಆಯ್ಕೆಗಳು ಲಭ್ಯವಿರುತ್ತವೆ. 5,500mAh ಬ್ಯಾಟರಿ ಹಾಗೂ 68W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ನೀಡಲಾಗುವುದು.

ಆಪರೇಟಿಂಗ್ ಸಿಸ್ಟಮ್ ಮತ್ತು ಸುರಕ್ಷತೆ

Android 15 ಆಧಾರಿತ Hello UI‌ನೊಂದಿಗೆ ಈ ಫೋನ್ ಲಭ್ಯವಿದ್ದು, ಮೂರು ವರ್ಷಗಳವರೆಗೆ Android ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್‌ಡೇಟ್‌ಗಳು ಸಿಗಲಿವೆ. IP68/IP69 ಜಲ ಹಾಗೂ ಧೂಳಿನಿಂದ ರಕ್ಷಣೆ, ಹಾಗೂ In-Display Fingerprint ಸೆನ್ಸಾರ್ ಸಹ ಇರಲಿದೆ.

Motorola Edge 60 ನಿಮ್ಮ ಮುಂದಿನ ಪ್ರೀಮಿಯಂ ಫೋನ್ ಆಯ್ಕೆಯಾಗಬಹುದು. ಉತ್ತಮ ಕ್ಯಾಮೆರಾ, ವೇಗದ ಕಾರ್ಯಕ್ಷಮತೆ, ಮತ್ತು ಹೆಚ್ಚು ಸ್ಟೋರೇಜ್ ಅಗತ್ಯವಿರುವವರಿಗೆ ಇದು ಪರಿಪೂರ್ಣ ಆಯ್ಕೆ.

See also  BCB Recruitment 2025 - ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿಗೆ ಅಧಿಸೂಚನೆ 2025 ಬಿಡುಗಡೆ ಮಾಡಿದೆ; ಸಂಪುರ್ಣ ವಿವರ.!!

Bhargava is a skilled News editor With years of experience, Job News, trends to keep readers informed.

Leave a Comment