ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತದೆ.
ಕರ್ನಾಟಕದ ಶಕ್ತಿ ಯೋಜನೆ : ಸದ್ಯ ಕರ್ನಾಟಕದಲ್ಲಿ ಜಾರಿಯಲ್ಲಿರುವ ಶಕ್ತಿ ಯೋಜನೆ, ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಬಸ್ ಪ್ರಯಾಣ ಅಷ್ಟೇ ಅಲ್ಲದೆ, ಇದು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸಿದೆ ಅದಷ್ಟೇ ಅಲ್ಲದೆ ಇದೀಗ ಉದ್ಯೋಗ ಅವಕಾಶವನ್ನು ಕೂಡ ಸೃಷ್ಟಿ ಮಾಡಿದೆ.
ಕರ್ನಾಟಕದ ಮಹಿಳೆಯರು ಉಚಿತ ಬಸ್ ಪ್ರಯಾಣದ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಶಿಕ್ಷಣ ಹಾಗೂ ಉದ್ಯೋಗ ಹಾಗೆ ಇತರೆ ಕೆಲಸಗಳಿಗೆ ಸಂಬಂಧಿಸಿದಂತೆ ಪ್ರವಾಸ ವಿವಿಧ ಉದ್ದೇಶಗಳಿಗೆ ಸಂಬಂಧಿಸಿದಂತೆ ಮಹಿಳೆಯರು ದಿನ ನಿತ್ಯ ಪ್ರಯಾಣ ಮಾಡುತ್ತಾರೆ ಅಂತಹ ಮಹಿಳೆಯರಿಗೆ ಈ ಒಂದು ಯೋಜನೆಯು ವರದಾನವಾಗಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ಇಲ್ಲಿಯವರೆಗೂ ಮಹಿಳೆಯರ ಪ್ರಯಾಣಿಸಿದ ಒಟ್ಟು ಟಿಕೆಟ್ ಮೌಲ್ಯವು 9 ಸಾವಿರ ಕೋಟಿ ಹಣಗಳು ದಾಟಿದೆ. ಈ ಯೋಜನೆಯಿಂದ 11,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ.
ಹೌದು, ಈ ಶಕ್ತಿ ಯೋಜನೆಯ ಉಚಿತ ಸರಕಾರಿ ಬಸ್ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದರಿಂದಾಗಿ, ಉತ್ತಮ ಸೇವೆಯನ್ನು ಒದಗಿಸಲು ಇನ್ನು ಹೆಚ್ಚಿನ ಸಂಖ್ಯೆಯ ಸುಮಾರು 5800 ಬಸ್ಸುಗಳನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು ಅನುಮೋದನೆ ದೊರೆತಿದೆ. ಈಗಾಗಲೇ ಹಲವಾರು ಬಸ್ಸುಗಳನ್ನು ಖರೀದಿಸಲಾಗಿದೆ ನಮಗೆ ತಿಳಿದಿರುವ ಪ್ರಕಾರ ಸುಮಾರು 4,891 ಬಸ್ಸುಗಳನ್ನು ಖರೀದಿ ಮಾಡಲಾಗಿದೆ.
ಇದರಿಂದಾಗಿ ನಮ್ಮ ರಾಜ್ಯದಲ್ಲಿ 11,300 ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ ಹಾಗೂ ರೂ.2000ಕ್ಕೂ ಹೆಚ್ಚು ಬಸ್ ಚಾಲಕರ ಕಂ. ನಿರ್ವಾಹಕ ಹುದ್ದೆಗಳು ಸೃಷ್ಟಿಯಾಗಿವೆ ಹಾಗೆಯೇ ತಾಂತ್ರಿಕ ಸಿಬ್ಬಂದಿಗಳ 300 ರಷ್ಟು ನೇಮಕಾತಿಯನ್ನು ಮಾಡಿಕೊಳ್ಳಲು ಸರ್ಕಾರ ಇದೀಗ ಆದೇಶ ಹೊರಡಿಸಿದೆ.
ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು ನಿಖರವಾದ & ಅಧಿಕೃತವಾದ ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.